RNC Hospital logoRNC HOSPITALBagalkot · ಆರ್‌ಎನ್‌ಸಿ ಆಸ್ಪತ್ರೆ
24-hr Emergency: 98868 36659
rakesh@rnchospital.com · 08354 220058
Home › Services › Spine Surgery & Slip Disc Treatment in Bagalkot

Spine Surgery & Slip Disc Treatment in Bagalkot

ಬೆನ್ನುಮೂಳೆ ಶಸ್ತ್ರಚಿಕಿತ್ಸೆ ಮತ್ತು ಸ್ಲಿಪ್ ಡಿಸ್ಕ್ ಚಿಕಿತ್ಸೆ – ಬಾಗಲಕೋಟೆ

Most spine problems, including many slip discs, get better without surgery. At RNC Hospital, Bagalkot, Neurosurgeon Dr. Rakesh A.V. first examines the patient carefully, explains the scan, and starts medicines and physiotherapy. Surgery is advised only when it is truly needed, such as nerve weakness or pain that does not improve with proper treatment.

ಅನೇಕ ಸ್ಲಿಪ್ ಡಿಸ್ಕ್ ಸೇರಿದಂತೆ ಹೆಚ್ಚಿನ ಬೆನ್ನುಮೂಳೆ ಸಮಸ್ಯೆಗಳು ಶಸ್ತ್ರಚಿಕಿತ್ಸೆ ಇಲ್ಲದೆಯೇ ಸುಧಾರಿಸುತ್ತವೆ. ಬಾಗಲಕೋಟೆಯ ಆರ್‌ಎನ್‌ಸಿ ಆಸ್ಪತ್ರೆಯಲ್ಲಿ ನರಶಸ್ತ್ರಚಿಕಿತ್ಸಕ ಡಾ. ರಾಕೇಶ್ ಎ.ವಿ. ಅವರು ಮೊದಲು ರೋಗಿಯನ್ನು ಸರಿಯಾಗಿ ಪರೀಕ್ಷಿಸಿ, ಸ್ಕ್ಯಾನ್ ವಿವರಿಸಿ, ಮಾತ್ರೆ ಮತ್ತು ಫಿಸಿಯೋಥೆರಪಿ ಆರಂಭಿಸುತ್ತಾರೆ. ನರಗಳ ದೌರ್ಬಲ್ಯ ಅಥವಾ ಸರಿಯಾದ ಚಿಕಿತ್ಸೆಯ ನಂತರವೂ ನೋವು ಕಡಿಮೆಯಾಗದಿದ್ದಾಗ ಮಾತ್ರ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಲಾಗುತ್ತದೆ.

See a doctor urgently if back or neck pain comes withಬೆನ್ನು ಅಥವಾ ಕುತ್ತಿಗೆ ನೋವಿನ ಜೊತೆ ಇವು ಇದ್ದರೆ ತಕ್ಷಣ ವೈದ್ಯರನ್ನು ಕಾಣಿ

  • Loss of control of urine or stools
  • Numbness around the private parts or buttocks
  • Weakness in the legs or foot drop
  • Difficulty walking or loss of balance
  • Pain after a fall or accident
  • ಮೂತ್ರ ಅಥವಾ ಮಲದ ಮೇಲೆ ನಿಯಂತ್ರಣ ತಪ್ಪುವುದು
  • ಗುಪ್ತಾಂಗ ಅಥವಾ ಪೃಷ್ಠದ ಸುತ್ತ ಜೋಮು
  • ಕಾಲುಗಳಲ್ಲಿ ಶಕ್ತಿ ಕಡಿಮೆಯಾಗುವುದು ಅಥವಾ ಪಾದ ಎತ್ತಲು ಆಗದಿರುವುದು
  • ನಡೆಯಲು ಕಷ್ಟ ಅಥವಾ ಸಮತೋಲನ ತಪ್ಪುವುದು
  • ಬಿದ್ದ ನಂತರ ಅಥವಾ ಅಪಘಾತದ ನಂತರ ನೋವು

Conditions we treatನಾವು ಚಿಕಿತ್ಸೆ ನೀಡುವ ಸಮಸ್ಯೆಗಳು

  • Slip disc (disc prolapse) in the lower back and neck, and sciatica
  • Narrowing of the spinal canal (spinal stenosis) causing leg pain while walking
  • Spine fractures and spinal cord injury after accidents
  • Spinal cord compression and spine tumours
  • ಸೊಂಟ ಮತ್ತು ಕುತ್ತಿಗೆಯ ಸ್ಲಿಪ್ ಡಿಸ್ಕ್, ಸಯಾಟಿಕಾ (ಕಾಲಿಗೆ ಇಳಿಯುವ ನೋವು)
  • ನಡೆಯುವಾಗ ಕಾಲು ನೋವು ತರುವ ಬೆನ್ನುಹುರಿ ನಾಳದ ಸಂಕುಚಿತತೆ (ಸ್ಪೈನಲ್ ಸ್ಟೆನೋಸಿಸ್)
  • ಅಪಘಾತದಿಂದ ಬೆನ್ನುಮೂಳೆ ಮುರಿತ ಮತ್ತು ಬೆನ್ನುಹುರಿ ಪೆಟ್ಟು
  • ಬೆನ್ನುಹುರಿಯ ಮೇಲಿನ ಒತ್ತಡ ಮತ್ತು ಬೆನ್ನುಮೂಳೆ ಗಡ್ಡೆಗಳು

Our approachನಮ್ಮ ಚಿಕಿತ್ಸಾ ವಿಧಾನ

  • Careful examination by a neurosurgeon and a clear explanation of the MRI
  • Medicines, posture advice and physiotherapy as the first step
  • Surgery only when there is a clear reason, explained to the family in advance
  • Operation theatre and neuro ICU in the hospital
  • Physiotherapy after surgery to return to normal work
  • ನರಶಸ್ತ್ರಚಿಕಿತ್ಸಕರಿಂದ ಸರಿಯಾದ ಪರೀಕ್ಷೆ ಮತ್ತು MRI ಬಗ್ಗೆ ಸ್ಪಷ್ಟ ವಿವರಣೆ
  • ಮೊದಲ ಹಂತವಾಗಿ ಮಾತ್ರೆ, ಕುಳಿತುಕೊಳ್ಳುವ-ನಿಲ್ಲುವ ಸರಿಯಾದ ಭಂಗಿಯ ಸಲಹೆ ಮತ್ತು ಫಿಸಿಯೋಥೆರಪಿ
  • ಸ್ಪಷ್ಟ ಕಾರಣವಿದ್ದಾಗ ಮಾತ್ರ ಶಸ್ತ್ರಚಿಕಿತ್ಸೆ, ಮೊದಲೇ ಕುಟುಂಬಕ್ಕೆ ವಿವರಣೆ
  • ಆಸ್ಪತ್ರೆಯಲ್ಲೇ ಆಪರೇಷನ್ ಥಿಯೇಟರ್ ಮತ್ತು ನ್ಯೂರೋ ICU
  • ಶಸ್ತ್ರಚಿಕಿತ್ಸೆಯ ನಂತರ ಮತ್ತೆ ಕೆಲಸಕ್ಕೆ ಮರಳಲು ಫಿಸಿಯೋಥೆರಪಿ
Dr. Rakesh A.V., Consultant Neurosurgeon, RNC Hospital Bagalkot
Dr. Rakesh A.V.
Founder & Consultant Neurosurgeon
MBBS, MS, MRCS (Edinburgh), MCh Neurosurgery
ಡಾ. ರಾಕೇಶ್ ಎ.ವಿ. – ನರಶಸ್ತ್ರಚಿಕಿತ್ಸಕರು

Frequently asked questionsಸಾಮಾನ್ಯ ಪ್ರಶ್ನೆಗಳು

Does every slip disc need an operation?

No. Most slip discs improve with medicines, rest from heavy work and physiotherapy over a few weeks. Surgery is considered when there is nerve weakness, loss of bladder control, or pain that does not settle with proper treatment.

Who performs spine surgery at RNC Hospital?

Spine surgery is done by Consultant Neurosurgeon Dr. Rakesh A.V. (MBBS, MS, MRCS Edinburgh, MCh Neurosurgery).

What should I bring for my first visit?

Bring your MRI or X-ray films and reports, previous prescriptions and a list of the medicines you take.

ಪ್ರತಿ ಸ್ಲಿಪ್ ಡಿಸ್ಕ್‌ಗೂ ಆಪರೇಷನ್ ಬೇಕೇ?

ಇಲ್ಲ. ಹೆಚ್ಚಿನ ಸ್ಲಿಪ್ ಡಿಸ್ಕ್ ಕೆಲವು ವಾರಗಳಲ್ಲಿ ಮಾತ್ರೆ, ಭಾರದ ಕೆಲಸದಿಂದ ವಿಶ್ರಾಂತಿ ಮತ್ತು ಫಿಸಿಯೋಥೆರಪಿಯಿಂದ ಸುಧಾರಿಸುತ್ತದೆ. ನರ ದೌರ್ಬಲ್ಯ, ಮೂತ್ರದ ನಿಯಂತ್ರಣ ತಪ್ಪುವುದು ಅಥವಾ ಸರಿಯಾದ ಚಿಕಿತ್ಸೆಯ ನಂತರವೂ ನೋವು ಕಡಿಮೆಯಾಗದಿದ್ದಾಗ ಶಸ್ತ್ರಚಿಕಿತ್ಸೆ ಪರಿಗಣಿಸಲಾಗುತ್ತದೆ.

ಮೊದಲ ಭೇಟಿಗೆ ಏನು ತರಬೇಕು?

MRI ಅಥವಾ ಎಕ್ಸ್-ರೇ ಫಿಲ್ಮ್ ಮತ್ತು ರಿಪೋರ್ಟ್, ಹಳೆಯ ಚೀಟಿಗಳು ಮತ್ತು ನೀವು ತೆಗೆದುಕೊಳ್ಳುವ ಮಾತ್ರೆಗಳ ಪಟ್ಟಿ ತನ್ನಿ.

Need help? Call RNC Hospital, Bagalkot

ಸಹಾಯ ಬೇಕೇ? ಆರ್‌ಎನ್‌ಸಿ ಆಸ್ಪತ್ರೆಗೆ ಕರೆ ಮಾಡಿ

98868 36659

24-hour emergency · OPD Monday–Saturday · Navanagar Road, near Rotary Circle

Other servicesಇತರ ಸೇವೆಗಳು

Book an appointmentಅಪಾಯಿಂಟ್‌ಮೆಂಟ್ ಬುಕ್ ಮಾಡಿ

Also for a second opinion on your reports or scans · ರಿಪೋರ್ಟ್ ಅಥವಾ ಸ್ಕ್ಯಾನ್ ಬಗ್ಗೆ ಎರಡನೇ ಅಭಿಪ್ರಾಯಕ್ಕೂ

Emergency? Do not wait – call 98868 36659 · ತುರ್ತು ಇದ್ದರೆ ಕಾಯಬೇಡಿ, ಕರೆ ಮಾಡಿ